ಮಂಗಳವಾರ, ಸೆಪ್ಟೆಂಬರ್ 11, 2018

‘ಚಿಟ್ಟಾಣಿಯವರ ಕೊನೆಯ ದಿನಗಳು’ ಕೃತಿ ಅನಾವರಣ


ಚಿಟ್ಟಾಣಿಯವರ ಕೊನೆಯ ದಿನಗಳುಕೃತಿ ಅನಾವರಣ

ಉಡುಪಿ: ಸುಮಾರು ಏಳು ದಶಕಗಳ ಕಾಲ ದಣಿವರಿಯದೇ ವೇಷಕಟ್ಟಿಕೊಂಡು ಕುಣಿದ ಪದ್ಮಶ್ರೀ ಚಿಟ್ಟಾಣಿಯವರು ನಮ್ಮನ್ನಗಲಿ ವರ್ಷವಾಗುತ್ತಾ ಬಂತು. ಅವರು ಇಹಲೋಕದಿಂದ ದೂರಸರಿದರೂ, ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಮೊಟ್ಟ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಅಭಿಜಾತ ಕಲಾವಿದರಿವರು. ಅಂತಹ ಚಿಟ್ಟಾಣಿಯವರ ಜೀವಿತದ ಕೊನೆಯ ದಿನಗಳ ಚಿತ್ರಸಹಿತ ವಿವರಗಳನ್ನೊಳಗೊಂಡ ಕೃತಿ, ‘ಚಿಟ್ಟಾಣಿಯವರ ಕೊನೆಯ ದಿನಗಳುಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಂಡು ಓದುಗರ ಕೈಸೇರಲಿದೆ. ರಾಮಚಂದ್ರ ಹೆಗಡೆಯವರ ಬದುಕಿನ ಕೊನೆಗಾಲದ ಕೆಲವು ಸ್ವಾರಸ್ಯಕರ ಘಟನೆಗಳು, ಅಂತಿಮ ಕ್ಷಣದ ಸಂಗತಿಗಳು ಎಲ್ಲವೂ ಪುಸ್ತಕದಲ್ಲಿ ಮೇಳೈಸಿಕೊಂಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹೆಗಡೆಯವರ ಕೊನೆಯ ದಿನಗಳು ದಾಖಲೆಯಾಗಿ ಉಳಿಯಬೇಕೆಂಬ ಸದುದ್ಧೇಶದಿಂದ ಲೇಖಕರೂ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರೂ ಆಗಿರುವ ಶಿವಕುಮಾರ ಬಿ.. ಅಳಗೋಡು ಹೊತ್ತಗೆಯನ್ನು ರಚಿಸಿರುತ್ತಾರೆ. ಪ್ರಕಾಶಕನ: ಹೆಗ್ಗದ್ದೆ ಪ್ರಕಾಶನ. ಬೆಲೆ: 100ರೂ. ಓದುಗರು ಪುಸ್ತಕಗಳಿಗಾಗಿ ಇಂದೇ ಸಂಪರ್ಕಿಸಿ.(9611976709)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ